ಶೀರ್ಷಿಕೆ: ಸ.ಹಿ.ಪ್ರಾ.ಶಾ. ಕಡೇ ಮನುಗನಹಳ್ಳಿಯಲ್ಲಿ 'ವಾರದ ವಿಜ್ಞಾನ ಪ್ರಯೋಗ'
ದಿನಾಂಕ 22-12-2025 ರಂದು ನಮ್ಮ ಸ.ಹಿ.ಪ್ರಾ.ಶಾ. ಕಡೇ ಮನುಗನಹಳ್ಳಿ ಶಾಲೆಯಲ್ಲಿ 'ವಾರದ ವಿಜ್ಞಾನ ಪ್ರಯೋಗ' ಕಾರ್ಯಕ್ರಮವನ್ನು ನಡೆಸಲಾಯಿತು.
ಈ ವಾರ "ಮದ್ಯದಲ್ಲಿ ತೇಲುವ ಮತ್ತು ಮುಳುಗುವ ವಸ್ತುಗಳು" ಎಂಬ ವಿಷಯದ ಕುರಿತು ವಿಜ್ಞಾನ ಶಿಕ್ಷಕರಾದ ಶ್ರೀಮತಿ ಭಾಗ್ಯಶ್ರೀ ಅವರು ಮಕ್ಕಳಿಗೆ ಪ್ರಾತ್ಯಕ್ಷಿಕೆ ನೀಡಿದರು. ಅವರು ಶಾಲಾ ಆವರಣದಲ್ಲಿ ಎಲೆ, ಕಲ್ಲು ಮುಂತಾದ ವಸ್ತುಗಳನ್ನು ಬಳಸಿ, ಅವು ನೀರಿನಲ್ಲಿ ಹೇಗೆ ವರ್ತಿಸುತ್ತವೆ ಎಂಬುದನ್ನು ಪ್ರಯೋಗದ ಮೂಲಕ ತೋರಿಸಿಕೊಟ್ಟರು.
ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿ, ವಸ್ತುಗಳ ತೂಕ ಮತ್ತು ಸಾಂದ್ರತೆಯ ಬಗ್ಗೆ ಸರಳವಾಗಿ ಅರಿತುಕೊಂಡರು. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಈ ಪ್ರಯೋಗ ಬಹಳ ಸಹಕಾರಿಯಾಯಿತು



